Regional Chapter | President Name | Phone No. | Secretary Name | Phone No. |
---|---|---|---|---|
Koppal | Rudreshappa, T. | 8431458967 | Santhosh Pattadakal | 8618742613 |
(a) ಪ್ರಧಾನ ಮಂತ್ರಿಗಳ ರೈತರ ಆದಾಯ ದ್ವಿಗುಣಗೊಳಿಸುವ ಆಶಯ ಈಡೇರಿಸುವ ಕಿರು ಹೆಜ್ಜೆಯಾಗಿ ಐಎಟಿ ಕೊಪ್ಪಳ ದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ದಿನಾಂಕ 10-08-2021 ರಂದು ಸಭೆ ಸೇರಿ, ರೈತ ಉತ್ಪಾದಕ ಕಂಪನಿ ಪ್ರಾರಂಭಿಸಲು ಕಾಯರ್ೋನ್ಮುಖರಾದರು. ನಬಾರ್ಡ ಪ್ರಾಯೋಜಿತ ರೈತ ಉತ್ಪಾದಕ ಕಂಪನಿ ಪ್ರಾರಂಭಿಸಲು ಹನ್ನೊಂದು ನಿದರ್ೇಶಕರನ್ನೊಳಗೊಂಡ ಸಮಿತಿ ರಚಿಸಿಕೊಂಡು ಗವಿ ಗ್ರೀನ್ ರೈತ ಉತ್ಪಾದಕ ಕಂಪನಿ ನಿ. ಸಂಸ್ಥೆಯನ್ನು ಕಂಪನಿ ಕಾಯಿದೆ ಪ್ರಕಾರ ನೋಂದಣಿ ಮಾಡಲಾಗಿದೆ. ಕಂಪನಿಯ ನಿದರ್ೇಶಕರ ಪರಿಶ್ರಮದೊಂದಿಗೆ ರೈತರ ಸದಸ್ಯತ್ವ ಪ್ರಾರಂಭಿಸಿ ಒಟ್ಟು 314 ಸದಸ್ಯರನ್ನು ನೋಂದಾಯಿಸಿಕೊಂಡು ತಲಾ ರೂ 1,000 ಮುಖ ಬೆಲೆಯ 314 ಶೇರು ಗಳನ್ನು ನೀಡಿ ರೂ 3,14,000.00 ಮೊತ್ತವನ್ನು ಸಂಗ್ರಹಿಸಿ ನಬಾರ್ಡ ಸಂಸ್ಥೆಯಿಂದ ರೂ 3,14,000.00 ಇಕ್ವಿಟಿ ಗ್ರಾಂಟ್ ಪಡೆಯಲಾಗಿದೆ. ಗವಿ ಗ್ರೀನ ರೈತ ಉತ್ಪಾದಕ ಕಂಪನಿ ನಿ. ಸಂಸ್ಥೆಯ ಸದಸ್ಯರ ಜಮೀನುಗಳಲ್ಲಿ ಔಷಧೀಯ ಮತ್ತು ಸುಗಂಧ ಭರಿತ ಸಸ್ಯಗಳ ಉತ್ಪಾದನೆ ಕೈಗೊಂಡು ರೈತರ ಆದಾಯವನ್ನು ಹೆಚ್ಚಿಸಲು ಕ್ರಮ ವಹಿಸಿದೆ.
(b) MANAGE ಸಂಸ್ಥೆಯು ಕೃಷಿ ಪರಿಕರ ಮಾರಾಟಗಾರರಿಗೆ Diploma in Agricultural Extension Services for Input Dealers (DAESI) ಪ್ರಾರಂಭಿಸಿದ್ದು, ಐಎಟಿ ಕೊಪ್ಪಳ ಸಂಸ್ಥೆಗೆ 2021 ರಲ್ಲಿ ಒಂದು ಬ್ಯಾಚ್ ದೇಸಿ ಕೋರ್ಸ ನಡೆಸಲು ಮಂಜೂರ ಮಾಡಿತು. ಗಂಗಾವತಿ ತಾಲೂಕಿನ ಒಟ್ಟು 40 ಕೃಷಿ ಪರಿಕರ ಮಾರಾಟಗಾರರನ್ನು ದೇಸಿ ಕೊರ್ಸ ಗೆ ನೋಂದಣಿ ಮಾಡಿಕೊಂಡು 48 ವಾರಗಳ ಡಿಪ್ಲೊಮಾ ಕೊರ್ಸ ನ್ನು ಆಯೋಜಿಸಲಾಗಿದೆ.
(c) ಜಿಲ್ಲೆಯಲ್ಲಿ 2021 ನೇ ಸಾಲಿನಲ್ಲಿ ಕೊರೊನಾ ಹಾವಳಿ ಅಧಿಕವಾದಾಗ ಕೊಪ್ಪಳದ ಗವಿಶ್ರೀಗಳು ಮಠದ ವಿದ್ಯಾಥರ್ಿನಿಯರ ಹಾಸ್ಟೆಲ್ ಹಾಗೂ ವೃಧ್ಧಾಶ್ರಮದಲ್ಲ್ಲಿ ರೋಗಿಗಳ ಆರೈಕೆ ಕಾಯಕವನ್ನು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿತು. ದೇಸಿ ಬ್ಯಾಚ್ ನ ಅಭ್ಯಥರ್ಿಗಳು ಸದರಿ ಕಾರ್ಯಕ್ಕೆ ರೂ 51,000.00 ನಗದು ಮತ್ತು 150 ಕೇಜಿ ಅಕ್ಕಿಯನ್ನು ಶ್ರೀ ಮಠಕ್ಕೆ ದೇಣಿಗೆ ನೀಡಿದ್ದಾರೆ.
(d) ಐಎಟಿ ಕೊಪ್ಪಳ ಸಂಸ್ಥೆಯು ದಿನಾಂಕ 5-9-2021 ರಂದು ಯಲಬುಗರ್ಾ ತಾಲೂಕಿನ ಮುಧೋಳ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಆಯೋಜಿಸಿ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಶಾಲಾ ಆವರಣದಲ್ಲಿ ಹಲವು ಜಾತಿಯ ಸಸಿಗಳನ್ನು ನೆಡಲಾಯಿತು. ಕೊಪ್ಪಳ ಕ್ಷೇತ್ರದ ಸಂಸದರಾದ ಶ್ರೀ ಕರಡಿ ಸಂಗಣ್ಣ ನವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(e) ಐಎಟಿ ಕೊಪ್ಪಳ ಸಂಸ್ಥೆಯು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ರವರ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದ ತರಬೇತಿ ಭವನದಲ್ಲಿ 23-12-2021 ದಿನಾಂಕದಂದು ರೈತರ ದಿನಾಚರಣೆ ಆಚರಿಸಲಾಯಿತು. ತಾಲೂಕಿನ ಕೃಷಿಕ ಸಮಾಜದ ಪದಾಧಿಕಾರಿಗಳು, 50 ಕ್ಕೂ ಹೆಚ್ಚು ಪ್ರಗತಿಪರ ರೈತರು ಆಗಮಿಸಿದ್ದರು. ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳು, ಕೃಷಿ ಇಲಾಖೆಯ ಜಂಟಿ ಕೃಷಿ ನಿದರ್ೇಶಕರು ಹಾಗೂ ಇತರರು ರೈತರ ಆದಾಯ ದ್ವಿಗುಣಗೊಳಿಸುವುದು, ಸಮಗ್ರ ಕೃಷಿ ಪಧ್ಧತಿ ಮುಂತಾದ ವಿಷಯಗಳ ಬಗ್ಗೆ ರೈತಿಗೆ ತಿಳಿಸಿದರು.
(f) ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯು ದಿನಾಂಕ 05-08-2021 ರಂದು ಆಯೋಜಿಸಿದ ರೈತ ಸಂತೆ ಕಾರ್ಯಕ್ರಮದಲ್ಲಿ ಐಎಟಿ ಕೊಪ್ಪಳ ಸಂಸ್ಥೆಯು ಭಾಗವಹಿಸಿ ರೈತರ ತೋಟಗಾರಿಕಾ ಉತ್ಪನ್ನಗಳ ಮಾರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು
(g) ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಇವರ ಸಹಯೋಗದೊಂದಿಗೆ ಐಎಟಿ ಕೊಪ್ಪಳ ಸಂಸ್ಥೆಯು ವಿಶ್ವ ಮಣ್ಣು ದಿನಾಚರಣೆ ಯನ್ನು ದಿನಾಂಕ 06-12-2021 ರಂದು ಕೃಷಿ ವಿಸ್ರರಣಾ ಶಿಕ್ಷಣ ಕೇಂದ್ರ ಕೊಪ್ಪಳ ದಲ್ಲಿ ಆಚರಿಸಲಾಯಿತು. ಕೃಷಿ ಇಲಾಖೆಯ ಜಂಟಿ ಕೃಷಿ ನಿದರ್ೇಶಕರು, ಸವರ್ೋದಯ ಸಂಸ್ಥೆಯ ನಾಗರಾಜ ದೇಸಾಯಿ, ದೇಸಿ ಬ್ಯಾಚ್ನ ಕೃಷಿ ಪರಿಕರ ಮಾರಾಟಗಾರರು, ಪ್ರಗತಿಪರ ರೈತರು ಭಾಗವಹಿಸಿದ್ದರು. ಮಣ್ಣಿನ ಪ್ರಾಮುಖ್ಯತೆ, ಮಣ್ಣಿನ ಸವುಕಳಿ ತಡೆಯುವುದು, ಮಣ್ಣಿನ ಫಲವತ್ತತೆ ಕಾಪಾಡುವುದು ಮುಂತಾದ ವಿಷಯಗಳ ಬಗ್ಗೆ ರೈತರಿಗೆ ತಿಳಿಸಲಾಯಿತು.
(h) ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಇವರ ಸಹಯೋಗದೊಂದಿಗೆ ಐಎಟಿ ಕೊಪ್ಪಳ ಸಂಸ್ಥೆಯು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 08-03-2022 ರಂದು ಆಯೋಜಿಸಿ ಕೃಷಿ ಉತ್ಪಾದನೆಯಲ್ಲಿ ಮಹಿಳೆಯರ ಪಾತ್ರ, ಕೈಗಾರಿಕೆಯಲ್ಲಿ, ದೇಶದ ಪ್ರಗತಿಯಲ್ಲಿ ಮಹಿಳೆಯರು ವಹಿಸಬಹುದಾದ ನಾಯಕತ್ವ ಹೀಗೆ ಹಲವು ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಚಚರ್ಿಸಲಾಯಿತು.