Activities of IAT Bangalore

2024-25

೧) ವಿಶ್ವ ಜೇನು ದಿನಾಚರಣೆ ೨೦೨೪
ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ದಿನಾಂಕ ೨೦-೦೫-೨೦೨೪ರಂದು ವಿಶ್ವ ಜೇನು ದಿನಾಚರಣೆ ೨೦೨೪ನ್ನು ಚಿತ್ರದುರ್ಗ ಪ್ರಾದೇಶಿಕ ಘಟಕದ ಸಹಯೋಗದಲ್ಲಿ ಹಿರಿಯೂರಿನ ಹೊರವಲಯದಲ್ಲಿರುವ ಶ್ರೀ.ಶ್ರೀನಿವಾಸ್‌ರವರ ಜೇನು ತೋಟದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಡಾ.ಆರ್.ಸಿ.ಜಗದೀಶ್, ಕುಲಪತಿಗಳು, ಕೆಳದಿ ತಿಮ್ಮಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗರವರು ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ. ಸಿ.ಎನ್.ನಂದಿನಿಕುಮಾರಿಯವರು ವಹಿಸಿದ್ದರು. ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರಿನ ಎಲ್ಲಾ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಚಿತ್ರದುರ್ಗ ಪ್ರಾದೇಶಿಕ ಘಟಕದ ಪದಾಧಿಕಾರಿಗಳು, ರೈತ ಬಾಂಧವರು ಹಾಗೂ ಜಿಲ್ಲೆಯ ಸುತ್ತಮುತ್ತಲಿನ ಆಜೀವ ಸದಸ್ಯರು ೨೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಡಾ.ಎಸ್.ಎಂ.ಶಾAತವೀರಯ್ಯ, ಜೇನು ಸಾಕಾಣಿಕೆ ಹಾಗೂ ಜೇನು ರೈತನಿಗೊಂದು ವರದಾನ ಎಂಬ ವಿಷಯದಲ್ಲಿ ಉಪನ್ಯಾಸವನ್ನು ನೀಡಿದರು. ಹಾಗೆಯೇ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಡಾ.ಬಿ.ಎಸ್.ಬಸವರಾಜಪ್ಪನವರು ಜೇನು ಕುರಿತ ಸಂಪೂರ್ಣ ಆಹಾರ ವಿಷಯವನ್ನು ಮಂಡಿಸಿದರು. ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು, ತೋಟಗಾರಿಕಾ ಮಹಾವಿದ್ಯಾಲಯದ ಎಲ್ಲಾ ತಜ್ಞರುಗಳು, ಪ್ರಾಧ್ಯಾಪಕರುಗಳು ಮತ್ತು ಶ್ರೀ.ಮಂಜುನಾಥ್, ಜಂಟಿ ಕೃಷಿ ನಿರ್ದೇಶಕರು ಮತ್ತು ಅಧ್ಯಕ್ಷರು, ಚಿತ್ರದುರ್ಗ ಪ್ರಾದೇಶಿಕ ಘಟಕ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ.ವೀರಣ್ಣ ಕಮತರರವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವ ಜೇನು ೨೦೨೪ರ ಕಾರ್ಯಕ್ರöಮದಲ್ಲಿ ಭಾಗವಹಿಸಿದ್ದವರನ್ನು ಸ್ವಾಗತಿಸಿದರು. ಶ್ರೀ.ವೀರಭದ್ರರೆಡ್ಡಿ, ಕಾರ್ಯದರ್ಶಿ, ಕೃಷಿ ತಂತ್ರಜ್ಞರ ಸಂಸ್ಥೆ, ಚಿತ್ರದುರ್ಗ ಪ್ರಾದೇಶಿಕ ಘಟಕ ಇವರು ಕಾರ್ಯಕ್ರಮದ ನಿರೂಪಣೆಯೊಂದಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು.

೨) ಬಿದಿರು ಕೃಷಿ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಬಿದಿರಿನ ಮೌಲ್ಯವರ್ಧಿತ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಕಾರ್ಯಾಗಾರ ೨೮-೦೬-೨೦೨೪
ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು, ಕೃಷಿ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯ ಇಲಾಖೆ ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ, ಮತ್ತು ಬಾಂಬೂ ಸೊಸೈಟಿ ಆಫ್ ಇಂಡಿಯಾ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೮-೦೬-೨೦೨೪ರಂದು ಕೃಷಿ ಇಲಾಖೆಯ ‘ಸಂಗಮ’ ಸಭಾಂಗಣದಲ್ಲಿ ಬಿದಿರು ಕೃಷಿ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಬಿದಿರಿನ ಮೌಲ್ಯವರ್ಧಿತ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು
ಶ್ರೀಯುತ.ವಿ.ಕೆ.ಕಮತರ, ಕಾರ್ಯದರ್ಶಿಗಳು, ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂತ ಶಿಶುನಾಳ ಶರೀಫರ ಅಮೂಲ್ಯವಾದ ನುಡಿಮುತ್ತುಗಳನ್ನು ನೆನಪಿಗೆ ತಂದರು. ಮನುಷ್ಯನ ಹುಟ್ಟಿನಿಂದ, ಸಾಯುವತನಕ ಜೀವನ ಸಂಗಾತಿಯಾಗಿ ಸತ್ತ ನಂತರ ಚಟ್ಟದ ವಿಮಾನದ ರೂಪದಲ್ಲಿ ಶವವನ್ನು ಕೊಂಡೊಯ್ಯಲು ಬಿದಿರು ಬೇಕೇ ಬೇಕು ಎನ್ನುವ ಪರಿಜ್ಞಾನದೊಂದಿಗೆ ಪ್ರಾರಂಭಿಸಿ, ಆಗಮಿಸಿದ್ದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.
ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಸನ್ಮಾನ್ಯ ಶ್ರೀಯುತ.ಎನ್.ಚಲುವರಾಯಸ್ವಾಮಿರವರು ಬಿದಿರು ಸಸಿಗಳಿಗೆ ನೀರೆರೆಯುವ ಮುಖಾಂತರ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಮಾನ್ಯ ಕೃಷಿ ಮಂತ್ರಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಬಿದಿರು ನಮ್ಮ ದಿನನಿತ್ಯದ ಬದುಕಿನಲ್ಲಿ ಬಿದಿರಿನ ಅವಶ್ಯಕತೆ ಬಹಳವಾಗಿದೆ ಎಂಬುದನ್ನು ತಿಳಿಸುತ್ತಾ, ಬಿದಿರು ಬೆಳೆಯ ಅಭಿವೃದ್ಧಿ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಸರ್ಕಾರದಿಂದ ಎಲ್ಲಾ ಪ್ರೋತ್ಸಾಹ ನೀಡಲಾಗುವುದೆಂದರು. ಈ ಕಾರ್ಯಕ್ರಮ ರಾಜ್ಯಮಟ್ಟದ ಬೆಳಕು ಚೆಲ್ಲುವ ಕಾರ್ಯಕ್ರಮ ಆಗಿದ್ದು, ಬಿದಿರಿನ ಬೆಳೆ ಅಭಿವೃದ್ಧಿ ಮತ್ತು ಉಪಯೋಗಗಳ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು, ಅಲ್ಲದೆ ಕಡಿಮೆ ಖರ್ಚಿನಲ್ಲಿ, ಕಡಿಮೆ ನೀರಿನಲ್ಲೂ ಬೆಳೆಯ ಬಹುದಾದ ಬೆಳೆ ಹಾಗೂ ಬಿದಿರಿನಿಂದ ಮಾಡಿದ ವಸ್ತುಗಳು ಬಹಳ ಉಪಯುಕ್ತವಾಗಿರುವುದಾಗಿ ತಿಳಿಸಿದರು. ಬೆಂಗಳೂರು ಅಂತರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ ೨ರಲ್ಲಿ ಬಹುತೇಕ ಬಿದಿರನ್ನು ಬಳಸಿರುವ ಬಗ್ಗೆ ಉಲ್ಲೇಖಿಸಿ ಬಿದಿರಿನ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ಇದೇ ಸಮಯದಲ್ಲಿ ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ ವತಿಯಿಂದ ಹೊರತಂದಿರುವ “ಕೃಷಿ ಅರಣ್ಯ – ರೈತರಿಗೊಂದು ಆಶಾಕಿರಣ” ಎನ್ನುವ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ವಿಶೇಷ ಸಂಚಿಕೆಯು ಕೃಷಿ ಅರಣ್ಯದ ಸಮಗ್ರ ಮಾಹಿತಿಯನ್ನು ಹೊಂದಿದ್ದು, ರೈತರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯನ್ನು ನೀಡಲಿದೆಯೆಂದು ತಿಳಿಸಿದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರಾದ ಡಾ.ಎ.ಬಿ.ಪಾಟೀಲರು ಅರಣ್ಯ ಅಭಿವೃದ್ಧಿ ತೆರಿಗೆಯು ರಾಜ್ಯದಲ್ಲಿ ರೈತರು ಬಿದಿರು ಬೆಳೆಸುವಲ್ಲಿ ಅಡಚಣೆಯುಂಟು ಮಾಡಿರುತ್ತದೆ. ಇದರಿಂದ ಬಿದಿರಿನ ಕೊಯ್ಲು, ಸಾಗಾಟ, ಮಾರಾಟ ಇವುಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಇಲಾಖೆ ಸೂಕ್ತ ಗಮನ ಹರಿಸಬೇಕು. ಅಲ್ಲದೇ ರಾಜ್ಯದ ವಿವಿಧ ಕೃಷಿ ಹವಾಮಾನ ವಲಯಗಳಲ್ಲಿ ಸೂಕ್ತವಾದ ಬಿದಿರಿನ ತಳಿಯನ್ನು (ಜಾತಿ) ಬೆಳೆಯುವ ಬಗ್ಗೆ ತಿಳುವಳಿಕೆ ನೀಡುವ ಪಠ್ಯ ಸಿದ್ಧಪಡಿಸಿ ಒದಗಿಸಬೇಕು ಅಲ್ಲದೇ, ಡಾ.ಶೃತಿ ಸುಬ್ಬಣ್ಣ ಇವರು ಈ ಬಗ್ಗೆ ಅಧ್ಯಯನ ನಡೆಸಿದ್ದು ವಿಶ್ವದಲ್ಲಿ ಸುಮಾರು ೮೫೦ ಪ್ರಭೇದಗಳ ಬಿದಿರು ತಳಿಗಳಿದ್ದು ಭಾರತದಲ್ಲಿ ಕೇವಲ ೧೩೬ ಜಾತಿಯ ಬಿದಿರುಗಳಿವೆ ಹಾಗೂ ನಮಗೆ ಹೆಚ್ಚಾಗಿ ಕಾಣಸಿಗುವುದು ಕೇವಲ ೪೦ ಬಗೆಯ ಬಿದಿರುಗಳಷ್ಟೇ. ಆದ್ದರಿಂದ ಈ ಬಗ್ಗೆ ರಾಜ್ಯದ ಜನರ ಗಮನ ಸೆಳೆಯಲು ಕೃಷಿ ತಂತ್ರಜ್ಞರ ಸಂಸ್ಥೆಯವರು ಸರ್ಕಾರದ ಮೂರು ಇಲಾಖೆಗಳೊಂದಿಗೆ ಮತ್ತು ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ, ಭಾರತೀಯ ಬಿದಿರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಾಗಾರವನ್ನು ಏರ್ಪಡಿಸಿರುವುದು ಹಾಗೂ ಈ ಎಲ್ಲಾ ಸಂಸ್ಥೆಗಳ ಸಮನ್ವಯತೆ ಹಾಗೂ ಒಗ್ಗೂಡುವಿಕೆಯಿಂದ ಬಿದಿರು ಕೃಷಿ ಅಭಿವೃದ್ಧಿ ಸಾಧ್ಯವಿರುವುದಾಗಿ ತಿಳಿಸಿದರು.
ಬಿದಿರು ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ವತಿಯಿಂದ ಶ್ರೀಯುತ.ಪುನಾಟಿ ಶ್ರೀಧರ್,ಭಾ.ಅ.ಸೇ.ರವರು ಬಿದಿರಿನ ಉಪಯೋಗ, ಸಂಶೋಧನೆ, ಅಭಿವೃದ್ಧಿಗೆ ವಿಫುಲ ಅವಕಾಶವಿದೆ ಎಂದು ಹೇಳಿದರು. ನಾವು ಈ ಬಗ್ಗೆ ಕೃಷಿ ಅರಣ್ಯ ಉತ್ತೇಜಿಸಲು ಸಂಶೋಧನಾ ಸಂಸ್ಥೆಗಳು, ಅರಣ್ಯ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಮುಂತಾದವನ್ನು ಒಗ್ಗೂಡಿಸಿ ಕೆಲಸ ಮಾಡುವ ಪ್ರಯತ್ನ ನಡೆದಿದೆ. ಬಿದಿರಿನ ಅಭಿವೃದ್ಧಿಯ ಬಗ್ಗೆ ಸಮಗ್ರವಾದ ವರದಿಯನ್ನು ಯೋಜನಾ ಆಯೋಗದ ಗಮನಕ್ಕೆ ತಂದು ಕಾರ್ಯೋನ್ಮುಖರಾಗುವುದು ಒಳ್ಳೆಯದು. ಇದರಲ್ಲಿ ಕೃಷಿ ಹವಾಮಾನಕ್ಕೆ ಅನುಗುಣವಾಗಿ ಗುಣಮಟ್ಟದ ಸಸಿಗಳ ದೊರೆಯುವಿಕೆ, ಟಿಶ್ಯೂ ಕಲ್ಚರ್ ವಿಧಾನದಲ್ಲಿ ಸಸಿಗಳ ಉತ್ಪಾದನೆ ಹಾಗೂ ಇತರೆ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯವಾಗಿದೆಯೆಂದರು..
ಬಿದಿರು ಇತರೆ ಮರಗಳಿಗಿಂತಲೂ ಶೇ.೨೫-೩೦ರಷ್ಟು ಹೆಚ್ಚಿನ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಮಣ್ಣು ಮತ್ತು ನೀರಿನ ಸಂರಕ್ಷಣೆ, ಅರಣ್ಯೀಕರಣ ಹಾಗೂ ಗಾಳಿತಡೆಗಳು ಹೀಗೆ ಅನೇಕ ಉಪಯೋಗಗಳಿವೆ. ಆದುದರಿಂದ ಇತರೆ ರಾಜ್ಯಗಳಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಒಂದು “ಬಿದಿರು ಅಭಿವೃದ್ಧಿ ಮಂಡಳಿ” ಸ್ಥಾಪಿಸಿದರೆ ಉಪಯುಕ್ತ ಎಂದು ಒತ್ತಿ ಹೇಳಿದರು.
ಕೃಷಿ ಅರಣ್ಯ ರೈತರ ಹಾಗೂ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ.ಅಜಯ್ ಮಿಶ್ರಾ, ರವರು ಮಾತನಾಡುತ್ತಾ ರೈತರಿಗೆ ಅರಿವು ಮೂಡಿಸಲು ಕೃಷಿ ವನದಲ್ಲಿ ಬೆಳೆಯಬಹುದಾದ ಮರಗಳೊಂದಿಗೆ ಬಿದಿರಿನ ಆರ್ಥಿಕ ಆದಾಯ ಹಾಗೂ ಉಪಯೋಗದ ಬಗ್ಗೆ ಅರಿವು ಮೂಡಿಸಲಾಗುವುದರಿಂದ ಪರಿಸರ ಸಮತೋಲನ ಮಹತ್ವದ ಬಗ್ಗೆಯೂ ಗಮನ ನೀಡಲು ಪ್ರಚುರಪಡಿಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಓ) ಸ್ಥಾಪಿಸುವುದು ಮುಖಾಂತರ ಉತ್ಪಾದನೆ, ಮಾರಾಟ ಹಾಗೂ ಮೌಲ್ಯವರ್ಧನೆಗಳನ್ನು ಮಾಡಲು ಇಲಾಖೆಗಳು ಸಹಕರಿಸಿ ಬೆಳೆಗಾರರನ್ನು ಪಾಲುದಾರರನ್ನಾಗಿ ಮಾಡಲು ತಿಳಿಸಿದರು. ಇದರಿಂದ ಆರ್ಥಿಕ ಆದಾಯವು ಬರುತ್ತದೆ ಹಾಗೂ ಪರಿಸರ ಸಂರಕ್ಷಣೆಯೊAದಿಗೆ ಕೃಷಿ ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯವಾಗಲಿದೆ.
ನಂತರ ಮಾತನಾಡಿದ ಕೃಷಿ ಆಯುಕ್ತರಾದ ಶ್ರೀ.ವೈ.ಎಸ್.ಪಾಟೀಲರು ಕೃಷಿ ಇಲಾಖೆಯು ಬಿದಿರಿನ ಬಗ್ಗೆ ಒಲವು ತೋರಿದ್ದು, ಇಲಾಖೆಯಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಾಗಾರದಲ್ಲಿ ತಾಂತ್ರಿಕ ಅಧಿವೇಶನಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಯೋಜನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಶೃತಿ ಸುಬ್ಬಣ್ಣ ಇವರು ರಾಜ್ಯದಲ್ಲಿ ವಿವಿಧ ವಿಭಾಗಗಳಿಗೆ ಸೂಕ್ತವಾದ ಬಿದಿರಿನ ತಳಿಗಳ ಕುರಿತು ಹಾಗೂ ಬಿದಿರಿನ ಅಧಿಕ ಇಳುವರಿ ಪಡೆಯಲು ರೈತರು ಕೈಗೊಳ್ಳಬೇಕಾದ ಸೂಕ್ತ ಸಾಗುವಳಿ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ನಂತರ ಬಿದಿರು ಉದ್ಯಮಿಯಾದ ಶ್ರೀ.ಪರಮೇಶ್ವರನ್ ಅಯ್ಯರ್‌ರವರು ಬಿದಿರು ಕೃಷಿಯನ್ನು ಉದ್ದಿಮೆಯನ್ನಾಗಿ ಪರಿವರ್ತಿಸಲು ಬಿದಿರು ಬೆಳೆಗಾರರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಮುಂದುವರಿದು ಶ್ರೀ.ರುಥ್ರೇನ್,ಭಾ.ಅ.ಸೇ. ಇವರು ರಾಜ್ಯದ ಮಿಷನ್‌ನ ಅಧಿಕಾರಿಯಾಗಿ ಕರ್ನಾಟಕದಲ್ಲಿ ಬಿದಿರು ಮಿಷನ್ ಚಟುವಟಿಕೆಗಳ ಕುರಿತು ಬೆಳಕು ಚೆಲ್ಲಿದರು.
ನಂತರದ ಅಧಿವೇಶನದಲ್ಲಿ ಬಿದಿರು ಬೆಳೆಯ ತಜ್ಞರು, ನೀತಿ ನಿರೂಪಕರು ಹಾಗೂ ವಿಜ್ಞಾನಿಗಳು, ಉದ್ಯಮಿಗಳು, ಅಧಿಕಾರಿಗಳೊಂದಿಗೆ ಬಿದಿರು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ಕುರಿತ ಚರ್ಚೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಾಗಾರದಲ್ಲಿ ಬಿದಿರು ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು ಹಾಗೂ ಬಿದಿರು ಸಮ್ಮೇಳನ ಯಶಸ್ವಿಯಾಗಲು ಮತ್ತು ಶಿಬಿರಾರ್ಥಿಗಳು ಖುದ್ದಾಗಿ ಬಿದಿರಿನ ಮೌಲ್ಯವರ್ಧಿತ ಪದಾರ್ಥಗಳನ್ನು ವೀಕ್ಷಿಸುವಲ್ಲಿ ಕಾರಣೀಭೂತರೆನಿಸಿದರು.

೩) ‘ಕೃಷಿ ಅಂಕುರ’ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ
ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ವತಿಯಿಂದ ಬೆಂಗಳೂರು ಜಿಲ್ಲೆ, ಹೊಸಕೋಟೆ ತಾಲ್ಲೂಕು, ಸೂಲಿಬೆಲೆ ಹೋಬಳೀ, ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ‘ಕೃಷಿ ಅಂಕುರ’ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ೧೨-೦೭-೨೦೨೪ರಂದು ಏರ್ಪಡಿಸಲಾಗಿತ್ತು. ಬೇಗೂರು ಪ್ರೌಢಶಾಲೆಯ ೯ನೇ ತರಗತಿ ೬೦ ವಿದ್ಯಾರ್ಥಿಗಳಿಗೆ ಕೃಷಿ ಅಂಕುರ ಕಾರ್ಯಕ್ರಮದಡಿ ಒಂದು ವರ್ಷ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೃಷಿಗೆ ಸಂಬAಧಿಸಿದ ವಿಷಯಗಳನ್ನು ಬೋಧಿಸಲಾಯಿತು ಹಾಗೂ ವಾರ್ಷಿಕ ಪರೀಕ್ಷೆ ನಡೆಸಿ ವಿದ್ಯಾರ್ಥಿಯರಾದ ಸಂಧ್ಯಾ, ಮಧುಶ್ರೀ ಹಾಗೂ ಕೀರ್ತನಾರವರಿಗೆ ಬಹುಮಾನ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಸಿ.ಎನ್.ನಂದಿನಿಕುಮಾರಿಯವರು ಮಾತನಾಡಿ ರೈತಾಪಿ ವರ್ಗದ ಕುಟುಂಬದ ಮಕ್ಕಳು ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ವಿದ್ಯಾಭ್ಯಾಸದ ನಂತರ ಕೆಲಸಕ್ಕಾಗಿ ನಗರಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ವಿದ್ಯಾವಂತರು ಆಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಕೃಷಿ ಕ್ಷೇತ್ರವನ್ನು ಮುಂಚೂಣಿಗೆ ತರುವ ಕೆಲಸ ಮಾಡಬೆಕು. ಯುವಜನತೆ ಕೇವಲ ಕೈಗಾರಿಕೆ ಮತ್ತು ಸ್ವಯಂ ಉದ್ಯೋಗ ಪಡೆಯುವ ಧಾವಂತದಲ್ಲಿ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ವಿ.ಕೆ.ಕಮತರ್‌ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತಾಗಿ ಮಾತನಾಡಿದರು. ಜಂಟಿ ಕಾರ್ಯದರ್ಶಿಗಳಾದ ಡಾ.ಬಿ.ಕೃಷ್ಣಮೂರ್ತಿಯವರು ಕೃಷಿ ಅಂಕುರ ಕಾರ್ಯಕ್ರಮದ ವಿವರ ನೀಡಿದರು.
ಮುಖ್ಯ ಶಿಕ್ಷಕಿ ಸರಸ್ವತಿ ಕೆ.ಹೆಗಡೆ, ಸಚಿನ್ ನಂದವಾನ್, ಭಾನುಪ್ರಸಾದ್, ಬಿ.ಎಂ.ನಾರಾಯಣ ಸ್ವಾಮಿ, ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ.ಎಂ.ಮಹAತೇಶಪ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ, ಡಾ.ಎ.ಬಿ.ಪಾಟೀಲ್, ಸಿ.ಲೋಕೇಶ್ವರ್, ಡಾ.ಎಂ.ಭೀಮಣ್ಣ, ಡಾ.ರಾಜು ತೆಗ್ಗಳ್ಳಿ, ಡಾ.ಹರಿಣಿಕುಮಾರ್, ವಿ.ಎಸ್.ಪಾಟೀಲ್, ಶ್ರೀ.ಬಿ.ಹೆಚ್.ಪಿಂಜಾರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(೪)೫೬ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಹಿರಿಯ ಕೃಷಿ ತಂತ್ರಜ್ಞರಿಗೆ ಸತ್ಕಾರ
ದಿನಾಂಕ ೧೮-೧೨-೨೦೨೪ರಂದು ಕೃಷಿ ತಂತ್ರಜ್ಞರ ಸಂಸ್ಥೆಯ ೫೬ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕೃಷಿ ತಂತ್ರಜ್ಞರಾದ, ವಿಶ್ರಾಂತ ಕುಲಪತಿಗಳು, ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟಿçÃಯ ಆಹಾರ ಸಂಸ್ಕರಣೆ, ಉದ್ಯೋಗಿಕರಣ ಮತ್ತು ನಿರ್ವಹಣೆ ಸಂಸ್ಥೆ, ಕುಂಡಲಿ, ಹರಿಯಾಣ ಇವರಿಂದ ಪ್ರಧಾನ ಉಪನ್ಯಾಸ ಕಾರ್ಯಕ್ರಮವನ್ನು ಸಂಸ್ಥೆಯ ಅರಕೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪ್ರಧಾನ ಭಾಷಣದಲ್ಲಿ ಶ್ರೀಯುತರು ಆಹಾರ ಸಂಸ್ಕರಣೆಯಲ್ಲಿನ ಮೌಲ್ಯವರ್ಧನೆಗೆ ಸಂಬAಧಪಟ್ಟAತೆ ಹೆಚ್ಚಿನ ಅವಕಾಶಗಳು ಉದ್ಯೋಗ ಸೃಷ್ಠಿಯಾಗುತ್ತಿರುವ ಹಿನ್ನೆಲೆಯಿಂದ ಕೋಯ್ಲು ನಂತರದ ನಿರ್ವಹಣೆಗೆ ಹೆಚ್ಚಿನ ಪ್ರಾಧಾನ್ಯತೆಯಿರುವುದನ್ನು ಅಂಕಿ ಅಂಶಗಳೊAದಿಗೆ ತಿಳಿಯಪಡಿಸಿದರು.
ಸದರಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯು ೬೫ ವರ್ಷ ವಯಸ್ಸಿನ ಸುಮಾರು ೭೭ಕ್ಕೂ ಹೆಚ್ಚಿನ ಹಿರಿಯ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಸಿ.ಎನ್.ನಂದಿನಿಕುಮಾರಿಯವರು ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದು ವ್ಯವಸ್ಥಾಪನಾ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಂಸ್ಥೆಯ ಆಜೀವ ಸದಸ್ಯರು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

(೫)ದಿನಾಂಕ ೧೯-೦೨-೨೦೨೫ರಂದು ಸಾವಯವ ಕೃಷಿ : ಉತ್ಪಾದನೆ, ಪ್ರಮಾಣೀಕರಣ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು ಕಾರ್ಯಾಗಾರ.
ದಿನಾಂಕ ೧೯-೦೨-೨೦೨೫ರಂದು ಕೃಷಿ ತಂತ್ರಜ್ಞರ ಸಂಸ್ಥೆಯು ಮೆ.ಕಪೆಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಕಾರ್ಯಾಗಾರವನ್ನು “ಸಾವಯವ ಕೃಷಿ : ಉತ್ಪಾದನೆ, ಪ್ರಮಾಣೀಕರಣ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು“ ಕುರಿತು ಏರ್ಪಡಿಸಲಾಗಿತ್ತು. ಪ್ರಾರಂಭದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಕೃಷಿ ತಂತ್ರಜ್ಞರಾದ ಡಾ.ಅಶೋಕ ದಳವಾಯಿ, ಭಾ.ಆ.ಸೇ(ನಿವೃತ್ತ) ರವರಿಂದ “ಸಾವಯವ ಕೃಷಿಯಲ್ಲಿ ಅವಕಾಶಗಳು” ಎಂಬ ವಿಷಯದಲ್ಲಿ ಪ್ರಧಾನ ಭಾಷಣವನ್ನು ಏರ್ಪಡಿಸಲಾಗಿತ್ತು. ಕಾರ್ಯಾಗಾರದ ನಿಮಿತ್ತ ೫ ತಾಂತ್ರಿಕ ಅಧಿವೇಶನಗಳಾದ ಉತ್ಪಾಧನೆ, ಬೆಳೆಗಳ ಪದ್ಧತಿಗಳಲ್ಲಿನ ಪೀಡೆ ನಿರ್ವಹಣೆ, ಪ್ರಮಾಣೀಕರಣದ ನಿಯಮಗಳು, ಮಾರುಕಟ್ಟೆಯಲ್ಲಿನ ಅವಕಾಶಗಳು, ಮೌಲ್ಯವರ್ಧನೆಯಲ್ಲಿ ಅಳವಡಿಸಿಕೊಳ್ಳಬಹುದಾದ ತಂತ್ರಜ್ಞಾನಗಳು ಹಾಗೂ ಬಳಕೆ ಮಾಡುವಲ್ಲಿನ ಸಂವಾದಗಳ ಕುರಿತು ಅನುಭವಿ ತಂತ್ರಜ್ಞರು ಹಾಗೂ ಅಧಿಕಾರಿಗಳಿಂದ ನೆರವೇರಿಸಲಾಯಿತು. ಮುಕ್ತಾಯ ಸಮಾರಂಭದಲ್ಲಿ ಮೂಡಿಬಂದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ತೀರ್ಮಾನಿಸಲಾಯಿತು.
ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಸಿ.ಎನ್.ನಂದಿನಿಕುಮಾರಿಯವರು ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದು ವ್ಯವಸ್ಥಾಪನಾ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಂಸ್ಥೆಯ ಆಜೀವ ಸದಸ್ಯರು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

(೬)ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ೦೮-೦೩-೨೦೨೫
ಶ್ರೀಮತಿ.ಸಿ.ಎನ್.ನಂದಿನಿಕುಮಾರಿಯವರು ೨೦೨೪ರ ಪ್ರಾರಂಭದಲ್ಲಿ ನೀಡಿದ ದೇಣಿಗೆಯನ್ನು ಪರಿಗಣಿಸಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಮಾರ್ಚ್ ೮ ರಂದು ಮಹಿಳೆಯರ ಸಬಲೀಕರಣದ ಮೂಲಕ ಮುಖ್ಯವಾಹಿನಿಯಲ್ಲಿ ಕಂಡು ಬರುವಂತೆ ಆಯ್ದ ಪ್ರಗತಿಪರ ರೈತ ಮಹಿಳೆ ಹಾಗೂ ಒಬ್ಬರು ಅಥವಾ ಇಬ್ಬರಿಗೆ ದೇಣಿಗೆಯಿಂದ ಕ್ರೋಢೀಕೃತವಾಗುವ ಬಡ್ಡಿಮೊತ್ತವನ್ನು ಗೌರವಧನದ ಮೂಲಕ ಅತ್ಯುತ್ತಮ ಪ್ರಗತಿಪರ ರೈತ ಮಹಿಳೆಯರನ್ನು ಸನ್ಮಾನಿಸುವುದಾಗಿ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಮತಿ.ಸರಿತಾ.ಎಸ್.ಎಸ್. ಜೀವನ ಆರ್ಗಾನಿಕ್ಸ್, ಬೆಂಗಳೂರು ಇವರಿಂದ ಪ್ರಧಾನ ಭಾಷಣವನ್ನು ಏರ್ಪಡಿಸಲಾಗಿತ್ತು. ಬೆಂಗಳೂರು ಜಿಲ್ಲೆಯ ಕೆಂಚಗಾನಹಳ್ಳಿಯ ಶ್ರೀಮತಿ.ಪದ್ಮಿನಿ ಗೌಡ ಹಾಗೂ ಇಬ್ಬರು ಅತ್ಯುತ್ತಮ ರೈತ ಮಹಿಳೆಯರಿಗೆ ತಲಾ ರೂ.೫,೦೦೦/- ದಂತೆ ಗೌರವಧನವನ್ನು ಶ್ರೀಮತಿ.ಚೇತನಾ, ಕೆ.ಎನ್. ಮೈಸೂರು ಹಾಗೂ ಶ್ರೀಮತಿ.ಸುಷ್ಮಾ ಕಾಶೀನಾಥ, ಕಡಗಂಚಿ, ಕಲಬುರ್ಗಿ ಯವರಿಗೆ ನೀಡುತ್ತಾ ಒಟ್ಟು ನಾಲ್ವರು ಮಹಿಳೆಯರಿಗೆ ಈ ಸಂದರ್ಭದಲ್ಲಿ ನಿಯಮಾನುಸಾರ ಸಂಸ್ಥೆಯಿAದ ಸನ್ಮಾನಿಸಲಾಯಿತು.
ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಸಿ.ಎನ್.ನಂದಿನಿಕುಮಾರಿಯವರು ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದು ವ್ಯವಸ್ಥಾಪನಾ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಂಸ್ಥೆಯ ಆಜೀವ ಸದಸ್ಯರು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

2023-24

೧) “ಕಲಾಹಬ್ಬ”– ರಾಷ್ಟಿçÃಯ ಕೃಷಿ ಯುವಜನೋತ್ಸವ ಚಾಂಪಿಯನ್ ಗಳಿಂದ ಕಲಾ ಪ್ರದರ್ಶನ ಹಾಗೂ ಅಭಿನಂದನಾ ಸಮಾರಂಭ
ಇತ್ತೀಚೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ರಾಷ್ಟಿçÃಯ ಮಟ್ಟದ ಅಂತರ ಕೃಷಿ ವಿಶ್ವವಿದ್ಯಾನಿಲಯಗಳ ಯುವಜನೋತ್ಸವ “ಅಗ್ರಿ ಯೂನಿಫೆಸ್ಟ್ -೨೦೨೩” ಹಮ್ಮಿಕೊಂಡಿತ್ತು. ಸುಮಾರು ೬೦ ಕ್ಕೂ ಹೆಚ್ಚು ಕೃಷಿ ಸಂಬAಧಿತ ವಿಶ್ವವಿದ್ಯಾಲಯಗಳು ಈ ಕಲಾಮೇಳದಲ್ಲಿ ಭಾಗವಹಿಸಿದ್ದವು. ನಮ್ಮ ರಾಜ್ಯದ ಹೆಮ್ಮೆಯ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.
ವಿದ್ಯಾರ್ಥಿಗಳ ಕಲಾಸಾಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಾಂಪಿಯನ್ ಪಟ್ಟ ಪಡೆದುಕೊಂಡ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕರನ್ನು ಸನ್ಮಾನಿಸುವ ಕೃಷಿ ತಂತ್ರ‍್ರಜ್ಞರ ಸಂಸ್ಥೆ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ೨೪-೦೪-೨೦೨೩ ರಂದು ಕೃಷಿ ತಂತ್ರಜ್ಞರ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ಹಾಗೂ ವಿದ್ಯಾರ್ಥಿ ಕಲಾ ತಂಡದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಲಾಹಬ್ಬವನ್ನು ಉದ್ಘಾಟನೆ ಮಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಅವರು ಕಲಾ ಸಾಧಕರನ್ನು ಸನ್ಮಾನಿಸಿ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಮಾಡಿ ಸಭಿಕರನ್ನು ರಂಜಿಸಿದರು.

೨) ಕೃಷಿ ಅಂಕುರ ಕಾರ್ಯಕ್ರಮಕ್ಕೆ ಚಾಲನೆ
ಕೃಷಿ ತಂತ್ರಜ್ಞರ ಸಂಸ್ಥೆಯ ವಿಭಿನ್ನ ಆಲೋಚನೆ ಕೃಷಿ ಅಂಕುರ. ವಿದ್ಯಾರ್ಥಿಗಳಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವುದು, ಕೃಷಿ ತಂತ್ರಜ್ಞಾನಗಳ ಪರಿಚಯ, ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ತಜ್ಞರಿಂದ ವಿದ್ಯಾರ್ಥಿಗಳಿಗೆ ಸರಣಿ ಕೃಷಿ ಪಾಠ ಇಂತಹ ಹಲವು ಉದ್ದೇಶಗಳನ್ನು ಒಳಗೊಂಡ ಕೃಷಿ ಅಂಕುರ ಎಂಬ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.
ಕೃಷಿ ಅಂಕುರ ಉದ್ಘಾಟನಾ ಕಾರ್ಯಕ್ರಮವನ್ನು ೧೨-೦೬-೨೦೨೩ ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸಿ.ಎನ್. ನಂದಿನಿ ಕುಮಾರಿಯವರು, ಗ್ರಾಮೀಣ ಪ್ರದೇಶದ ಯುವ ಸಮೂಹ ಇಂದು ಕೃಷಿಯನ್ನು ತ್ಯಜಿಸಿ ನಗರಗಳತ್ತ ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿ ದೆಸೆಯಿಂದಲೆ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಬೇಕು. ವಿದ್ಯಾಭ್ಯಾಸದ ನಂತರ ಪುನಃ ಕೃಷಿಗೆ ಮರಳಬೇಕು ಎಂಬ ನಿಟ್ಟಿನಲ್ಲಿ ಕೃಷಿ ಅಂಕುರ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎಂದು ತಿಳಿಸಿದರು. ನಾಲ್ಕು ತಿಂಗಳ ಅವಧಿಯ ಈ ಕಾರ್ಯಕ್ರಮದಲ್ಲಿ ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ಕೃಷಿಗೆ ಸಂಬAಧಿಸಿದ ವಿವಿಧ ವಿಷಯಗಳ ಬಗ್ಗೆ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಂತ್ಯದಲ್ಲಿ ಕಿರು ಪರೀಕ್ಷೆಗಳನ್ನು ನಡೆಸಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಬಹುಮಾನ ವಿತರಣೆಯನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಕೃಷಿ ವಿಸ್ತರಣೆ ಮತ್ತು ರೈತ ಶಿಕ್ಷಣ ಉಪ ಸಮಿತಿಯ ಅಧ್ಯಕ್ಷರಾದ ಡಾ. ಬಿ. ಕೃಷ್ಣಮೂರ್ತಿ ವಿವರಿಸಿದರು.

೩) ವಿಶ್ವ ಆಹಾರ ದಿನಾಚರಣೆ ೨೦೨೩
ದಿನಾಂಕ ೧೬-೧೦-೨೦೨೩ರಂದು ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಕೃಷಿ ಸಚಿವರಾದ ಶ್ರೀ.ಎನ್.ಚಲುವರಾಯಸ್ವಾಮಿ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಸಿ.ಎನ್.ನಂದಿನಿ ಕುಮಾರಿಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಸನ್ಮಾನ್ಯ ಕೃಷಿ ಸಚಿವರು ‘ನೀರೇ ಜೀವನ, ನೀರೇ ಆಹಾರ’ ಎಂಬ ಘೋಷಣೆಗೆ ನೀರಿನ ಸಮರ್ಥ ಬಳಕೆಯಿಂದ ಮಾತ್ರ ಸಾಧ್ಯವಾಗಲಿದೆಯೆಂದು ತಿಳಿಸಿದರು. ೨೦೧೩ರಲ್ಲಿ ಕೇಂದ್ರ ಸರ್ಕಾರವು ಆಹಾರ ಭದ್ರತಾ ಯೋಜನೆಯಿಂದ ರೈತ ಸಮುದಾಯಕ್ಕೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಸಹಕಾರಿಯಾಗಿರುವುದನ್ನು ಉಲ್ಲೇಖಿಸಿದರು. ಇಲಾಖೆಯೊಂದೇ ರೈತರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುವುದು ಕಷ್ಟಸಾಧ್ಯವಾಗಿದ್ದು, ಇದರೊಂದಿಗೆ ಸಂಘ ಸಂಸ್ಥೆಗಳ ಪಾತ್ರವು ಬಹುಮುಖ್ಯವಾಗಿದ್ದು ಕೃಷಿ ತಂತ್ರಜ್ಞರ ಸಂಸ್ಥೆಯು ಹೆಚ್ಚಿನ ಪ್ರೋತ್ಸಾಹದಾಯಕವಾಗಿ ಚಟುವಟಿಕೆಗಳನ್ನು ನಿರ್ವಹಿಸುವಂತೆ ಸಲಹೆ ಮಾಡಿದರು. ಮುಂದುವರೆದು ಕೃಷಿ ತಂತ್ರಜ್ಞರ ಸಂಸ್ಥೆಗೆ ಬೇಕಾಗಬಹುದಾದ ಸಹಾಯಕ್ಕಾಗಿ ಇಲಾಖೆಯಿಂದಾಗಲೀ, ಸರಕಾರದಿಂದಾಗಲೀ ಸೂಕ್ತ ಬೆಂಬಲವನ್ನು ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಆಯುಕ್ತರಾದ ಶ್ರೀ.ವೈ.ಎಸ್. ಪಾಟೀಲ್, ಕೃಷಿ ನಿರ್ದೇಶಕರಾದ ಡಾ.ಜಿ.ಟಿ. ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಶ್ರಿ.ಬಿ.ವೈ.ಶ್ರೀನಿವಾಸ್‌ರವರು, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಶ್ರೀ.ಗಿರೀಶ್‌ರವರು ಭಾಗವಹಿಸಿದ್ದರು. ವಿಶ್ವ ಆಹಾರ ದಿನಾಚರಣೆಯ ಅಂಗವಾಗಿ ಸಂಸ್ಥೆಯು ಹಿರಿಯ ಪತ್ರಿಕೋದ್ಯಮಿ, ಪರಿಸರ ಪ್ರೇಮಿ, ಸಾಹಿತಿ, ಸಾಮಾಜಿಕ ಕಾರ್ಯಕರ್ತರಾದ ಶ್ರೀ.ನಾಗೇಶ ಹೆಗಡೆಯವರಿಂದ ಪ್ರಧಾನ ಭಾಷಣವನ್ನು ಏರ್ಪಡಿಸಲಾಗಿತ್ತು. ಶ್ರೀಯುತರು ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಹಾಗೂ ನೀರು ಇವುಗಳ ಸಮರ್ಥ ಬಳಕೆಯಿಂದ ಆಹಾರ ಉತ್ಪಾದನೆಯಲ್ಲಾಗುವ ಉತ್ತಮ ಪರಿಣಾಮಗಳನ್ನು ತಿಳಿಸಿಕೊಟ್ಟರು.

೪) ತಾರಸಿ ತೋಟ ಮತ್ತು ಕೈತೋಟ ತರಬೇತಿ ಕಾರ್ಯಕ್ರಮ -೧೬-೧೦-೨೦೨೩
ದಿನಾಂಕ ೧೬-೧೦-೨೦೨೩ರಂದು ಈ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಶ್ರೀ.ರಾಜೇಂದ್ರ ಹೆಗಡೆಯವರು ತಾರಸಿ ತೋಟ ಹಾಗೂ ಕೈತೋಟಗಳ ಪ್ರಾಮುಖ್ಯತೆ ಕುರಿತು ತಾಂತ್ರಿಕ ಅದಿವೇಶನವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ವಿ.ಕೆ.ಕಮತರರರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರöಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಜೀವ ಸದಸ್ಯರುಗಳು ಭಾಗವಹಿಸಿದ್ದರು.

೫)ವಿಶ್ವ ಮಣ್ಣು ದಿನಾಚರಣೆ, ಬೇಗೂರು ಸರ್ಕಾರಿ ಫ್ರೌಡಶಾಲೆ, ಹೊಸಕೋಟೆ ತಾಲ್ಲೂಕು
ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಹಾಗೂ ಸರ್ಕಾರಿ ಪ್ರೌಢಶಾಲೆ ಬೇಗೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ ೫-೧೨-೨೦೨೩ರಂದು ಬೆಂಗಳೂರು ಜಿಲ್ಲೆ, ಹೊಸಕೋಟೆ ತಾಲ್ಲೂಕು, ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಸಿ.ಎನ್.ನಂದಿನಿ ಕುಮಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ಉದ್ಘಾಟನಾ ಭಾಷಣದಲ್ಲಿ ಜೀವ ಸಂಕುಲ ನಿರಾಳವಾಗಿ ಜೀವಿಸಬೇಕಾದರೆ ಮಣ್ಣು ಮತ್ತು ನೀರಿನ ಮೂಲಗಳು ಶುದ್ಧವಾಗಿ ಇರಬೇಕು ಇವರೆಡೂ ಜೀವದ ಮೂಲಗಳು. ಮಣ್ಣಿನ ಸಂರಕ್ಷಣೆಯಿAದ ಮಾನವ ಸಂಕುಲದ ಉಳಿವು ಆಗಿರುವುದರಿಂದ ಮಣ್ಣಿನ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಬೇಕು. ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ರೈತಾಪಿ ವರ್ಗ ಹೆಚ್ಚಿನ ಫಸಲು ಪಡೆಯಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬರು ಮಣ್ಣು ಮಲಿನವಾಗದಂತೆ ಕಾಪಾಡಬೇಕು ಎಂದು ಹೇಳಿದರು. ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಶ್ರೀ.ವೀರಣ್ಣ ಕೆ.ಕಮತರ್‌ರವರು ಶಾಲಾ ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಅಂಕುರ ಕಾರ್ಯಕ್ರಮದ ಅಂಗವಾಗಿ ವಿಶ್ವ ಮಣ್ಣು ದಿನಾಚರಣೆ ಚಟುವಟಿಕೆಯನ್ನು ಸಂಸ್ಥೆಯ ಸದಸ್ಯರಾದ ಡಾ.ಬಿ.ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಸರ್ಕಾರಿ ಪ್ರೌಢಶಾಲೆ, ಬೇಗೂರಿನಲ್ಲಿ ಏರ್ಪಡಿಸಲಾಗಿತ್ತು. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸರಳಾರವರು ಜಾಗತಿಕ ಮಣ್ಣು ದಿನಾಚರಣೆಯ ಅಂಗವಾಗಿ ಮಣ್ಣಿನ ವಿಷಯ ಕುರಿತು ವಿಷಯವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಬೇಗೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ ಕೇಶವ ಹೆಗಡೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ.ದೊಡ್ಡೇಗೌಡರು, ಸದಸ್ಯರಾದ ಶ್ರೀ.ಬಿ.ಹೆಚ್.ಪಿಂಜಾರ್, ಶಾಲೆಯ ಸಹ ಶಿಕ್ಷಕರಾದ ಜ್ಞಾನ ಸಂಪತ್, ಸವಿತ ಏಣಗಿ, ಶಿವಸ್ವಾಮಿ, ಸಿದ್ದಲಿಂಗಯ್ಯ, ಶೈಲಜಾ, ಶಿವಕುಮಾರ್‌ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

೬)೫೫ನೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ.ಎಂ.ಪುಟ್ಟರುದ್ರಯ್ಯ ಸ್ಮಾರಕ ದತ್ತಿ ರಾಷ್ಟಿçÃಯ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ೨೦೨೩, ಹಿರಿಯ ಕೃಷಿ ತಂತ್ರಜ್ಞರಿಗೆ ಸತ್ಕಾರ
ದಿನಾಂಕ ೧೮-೧೨-೨೦೨೩ರಂದು ಕೃಷಿ ತಂತ್ರಜ್ಞರ ಸಂಸ್ಥೆಯ ೫೫ನೆಯ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಹೆಸರಾಂತ ಜನಾನುರಾಗಿಯಾಗಿ ಕೀಟ ತಂತ್ರಜ್ಞ ಡಾ.ಎಂ.ಪುಟ್ಟರುದ್ರಯ್ಯನವರ(೧೯೦೯-೧೯೮೩) ವಿದ್ಯಾರ್ಥಿ ಬಳಗವು ಹಾಗೂ ಹಿತೈಷಿಗಳೆಲ್ಲರೂ ಸ್ಥಾಪಿಸಿರುವ ಡಾ.ಎಂ.ಪುಟ್ಟರುದ್ರಯ್ಯ ಸ್ಮಾರಕ ದತ್ತಿ ರಾಷ್ಟಿçÃಯ ಪ್ರಶಸ್ತಿ ಪ್ರಧಾನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಸಂಸ್ಥೆಯ ಅರಕೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಸ್ಥಾಪನಾ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಶ್ರೀ.ಅಶೋಕ ದಳವಾಯಿ, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮುಖ್ಯಸ್ಥರು, ಎನ್.ಆರ್.ಎ.ಎ., ಭಾರತ ಸರ್ಕಾರ, ನವದೆಹಲಿ ಇವರು ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ.ಎಂ.ಪುಟ್ಟರುದ್ರಯ್ಯ ಸ್ಮಾರಕ ದತ್ತಿ ರಾಷ್ಟಿçÃಯ ಪ್ರಶಸ್ತಿಯನ್ನು ಕಳೆದ ೧೦ ವರ್ಷಗಳಲ್ಲಿ ಸಸ್ಯ ಸಂರಕ್ಷಣೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಾಧ್ಯಾಪಕ / ವಿಜ್ಞಾನಿ /ವಿಸ್ತರಣಾ ಕಾರ್ಯಕರ್ತರೊಬ್ಬರಿಗೆ ನೀಡಲಾಗುತ್ತದೆ. ಇದರ ಸ್ಮರಣಾರ್ಥ ಪ್ರಶಸ್ತಿ ಹಾಗೂ ರೂ.೧೦,೦೦೦/- ನಗದು ಬಹುಮಾನ ವನ್ನು ನೀಡುತ್ತಿರುವುದರಿಂದ ಈ ಬಾರಿ ಡಾ.ಎ.ಜಿ.ಶ್ರೀನಿವಾಸ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕೀಟಶಾಸ್ತç ವಿಭಾಗ, ಕೃಷಿ ಮಹಾವಿದ್ಯಾಲಯ, ರಾಯಚೂರು ಇವರಿಗೆ ಪ್ರಧಾನ ಮಾಡಲಾಯಿತು. ತದನಂತರ ಕಳೆದ ಬಾರಿಯ ಡಾ.ಎಂ.ಪುಟ್ಟರುದ್ರಯ್ಯನವರ ಸ್ಮರಣಾರ್ಥ ರಾಷ್ಟಿçÃಯ ಪ್ರಶಸ್ತಿ ವಿಜೇತರಾದ ಡಾ.ಶಾಮರಾವ್ ಜಹಗೀರ್‌ದಾರ್ ದತ್ತಿ ಸ್ಮಾರಕ ಉಪನ್ಯಾಸವನ್ನು ನೀಡಿದರು.
ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯ ೬೫ ವರ್ಷ ವಯಸ್ಸಿನ ಸುಮಾರು ೫೦ಕ್ಕೂ ಹೆಚ್ಚಿನ ಹಿರಿಯ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರು ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದು, ವ್ಯವಸ್ಥಾಪನಾ ಮಂಡಳಿಯ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರು ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದು, ವ್ಯವಸ್ಥಾಪನಾ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಾದ ಡಾ.ಜಿ.ಟಿ.ಪುತ್ರ, ಶ್ರೀ.ಬಿ.ವೈ.ಶ್ರೀನಿವಾಸ್ ಮತ್ತು ಸಂಸ್ಥೆಯ ಆಜೀವ ಸದಸ್ಯರುಗಳು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

7. WOMEN EMPOWER ENDOWMENT
The Donation of Rs.2.00 Lakh given by President Madam Smt.C.N.Nandini Kumari have been discussed. On similar lines of other endowment programmes it is proposed to have activity on Women Empowerment by honouring one progressive small and marginal farm women on International Womens Day i.e. on March 8th of every year. Accordingly the programme committee has informed to formalize guidelines and programme arrangements from 2024-25 onwards.

೮) ಅಂತರರಾಷ್ಟಿçÃಯ ಸಾವಯವ ಮತ್ತು ಸಿರಿಧಾನ್ಯ ಉತ್ಸವ ೨೦೨೩ ಬೆಳಗಾವಿ
ಬೆಳಗಾವಿಯಲ್ಲಿ ಏರ್ಪಡಿಸಲಾದ ಅಂತರರಾಷ್ಟಿçÃಯ ಸಾವಯವ ಮತ್ತು ಸಿರಿಧಾನ್ಯ ಮೇಳ ೨೦೨೩ ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯು ಕೃಷಿ ಇಲಾಖೆಯ ಸಂಯುಕ್ತ ಆಶ್ರಯದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವದಲ್ಲಿ ಸಂಸ್ಥೆಯ ವ್ಯವಸ್ಥಾಪನ ಸಮಿತಿಯ ಸದಸ್ಯರು ಹಾಗೂ ೨೫೦ ರೈತ ಮತ್ತು ರೈತ ಮಹಿಳೆಯವರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

2022-23

1) ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರಿನಲ್ಲಿ ಹ್ಯಾನ್ಸ್ ಇ ಕಾಡರ್ೆಲ್ ಮತ್ತು ಬಿ.ಜೆ.ನಂಜುಂಡಪ್ಪ ಸ್ಮಾರಕ ದತ್ತಿ ಉಪನ್ಯಾಸ ಮತ್ತು ವಿಶ್ವ ಆಹಾರ ದಿನಾಚರಣೆ-2022 ನ್ನು 28-10-2022 ರಂದು ಬೆಳಿಗ್ಗೆ 10.30 ಘಂಟೆಗೆ ಏರ್ಪಡಿಸಲಾಗಿತ್ತು.
ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನದ ಪಾತ್ರ ಮತ್ತು ಮಹತ್ವದ ಉಪನ್ಯಾಸವನ್ನು ಡಾ.ಸಿ.ಆರ್.ಚಿನ್ನಮುತ್ತು, ನಿವೃತ್ತ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಬೇಸಾಯ ಶಾಸ್ತ್ರ ವಿಭಾಗ, ತಮಿಳುನಾಡು ವಿಶ್ವವಿದ್ಯಾಲಯ, ಕೊಯಮತ್ತೂರು ಹಾಗೂ ಡಾ.ಸಿ.ನಾರಾಯಣ, ರಾಜ್ಯ ಮಾರಾಟ ವ್ಯವಸ್ಥಾಪಕರು, ಇಪ್ಕೋ ಕನರ್ಾಟಕ ಇವರುಗಳಿಂದ ತಾಂತ್ರಿಕ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು ಮುಂದುವರೆದು ಮಧ್ಯಾಹ್ನದ ಕಾರ್ಯಕ್ರಮದಲ್ಲಿ ವಿಶ್ವ ಆಹಾರ ದಿನಾಚರಣೆ-2022 ನ್ನು ಏರ್ಪಡಿಸಲಾಗಿತ್ತು. ಡಾ.ನರೇಂದ್ರ ರೈ ದೇರ್ಲ, ಸಹಪ್ರಾಧ್ಯಾಪಕರು, ಸಕರ್ಾರಿ ಪ್ರಥಮ ದಜರ್ೆ ಕಾಲೇಜು, ಪುತ್ತೂರು , ದಕ್ಷಿಣ ಕನದನಡ ಉಪನ್ಯಾಸವನ್ನು ನೀಡಿದರು. ಒಟ್ಟು 98 ಸದಸ್ಯರು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

2)ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಪ್ರಗತಿ ಪರ ರೈತರಿಗೆ ಸನ್ಮಾನ ಕಾರ್ಯಕ್ರಮ
ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆ ಹಾಗೂ ಪ್ರಗತಿ ಪರ ರೈತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರಿನಲ್ಲಿ 18-11-2022ರಂದು ಏರ್ಪಡಿಸಲಾಗಿತ್ತು. ಸನ್ಮಾನ್ಯ ಶ್ರೀ.ಬಿ.ಸಿ. ಪಾಟೀಲ್, ಮಾನ್ಯ ಕೃಷಿ ಸಚಿವರು, ಕನರ್ಾಟಕ ಸಕರ್ಾರ, ಬೆಂಗಳೂರುರವರು ಉದ್ಘಾಟಕರಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ.ಶಿವಯೋಗಿ ಪಿ.ಕಳಸದ,ಐ.ಎ.ಎಸ್., ಡಾ.ಎಂ.ವಿ.ವೆಂಕಟೇಶ್, ಐ.ಎ.ಎಸ್. ಮತ್ತು ಶ್ರೀ.ಬಿ.ಶರತ್, ಐ.ಎ.ಎಸ್. ಭಾಗವಹಿಸಿದ್ದರು. ಡಾ.ವಿ.ವೆಂಕಟಸುಬ್ರಮಣಿಯನ್, ನಿದರ್ೇಶಕರು, ಐ.ಸಿ.ಎ.ಆರ್.ಅಟಾರಿ, ಬೆಂಗಳೂರು ಸನ್ಮಾನ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದು. ಡಾ.ಹೆಚ್.ಏಕಾಂತಯ್ಯ, ಡಾ.ಎನ್.ಸಿ.ಪಟೇಲ್, ಪ್ರಗತಿಶೀಲ ರೈತರು ಹಾಗೂ ಶ್ರಿ.ಎಂ.ಎಸ್.ದಿವಾಕರ್, ಐ.ಎ.ಎಸ್., ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

3)ಸಂಸ್ಥಾಪನಾ ದಿನಾಚರಣೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ನೂತನ ಕುಲಪತಿಗಳಿಗೆ ಸನ್ಮಾನ
ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ದಿನಾಂಕ 18-12-2022, ಭಾನುವಾರದಂದು ಬೆಳಿಗ್ಗೆ 11.00 ಗಂಟೆಗೆ ಸಂಸ್ಥೆಯ 54ನೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ನೂತನ ಕುಲಪತಿಗಳಾದ ಡಾ.ಕೆ.ಸಿ.ವೀರಣ್ಣ, ಡಾ.ಆರ್.ಸಿ.ಜಗದೀಶ್, ಡಾ.ಎಸ್.ವಿ.ಸುರೇಶ, ಡಾ.ಪಿ.ಎಲ್.ಪಾಟೀಲ್ ಮತ್ತು ಡಾ.ಎಂ.ಹನುಮಂತಪ್ಪ ರವರಿಗೆ ಹಾಗೂ 65 ವರ್ಷ ವಯಸ್ಸಿನ ಸಂಸ್ಥೆಯ 60 ಜನ ಹಿರಿಯ ಕೃಷಿ ತಂತ್ರಜ್ಞರಿಗೆ ಸನ್ಮಾನ ಏರ್ಪಡಿಸಲಾಗಿತ್ತು. ಒಟ್ಟು 170 ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಡಾ.ಎಸ್.ಅಯ್ಯಪ್ಪನ್, ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ನಂದಿನಿಕುಮಾರಿಯವರು, ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

4) Seminar programme conducted a IAT Bengaluru
IAT conducted seminar on “Carbon Trading through suitable Agriculture Practices” on 17-03-2023 at IAT Bengaluru. The Seminar was inaugurated by Dr.Rajendra Hegde, Former Director, NBSS & LUP, Bengaluru presided by Smt. C.N.Nandini Kumari, President, IAT, Bengaluru.
Guest speakers Sri. Neelesh Sachdev, Business Head, Kosher Climate, Ms.Vidya Kunjappa, Senior Consultant, Kosher Climate and Sri.Ravi Trivedi, Resource Person, Climate change projects gave mind blowing speech.
IATians 58 members were attended the seminar programme, 62 members attended online. Totally the programme was successfully completed gave suggestions for the above programme.

The Chairpersons of different sub-committees of the Institution have implemented various programmes. workshops, Brainstorming / Interaction Sessions and on areas related to Education, personality development, health, Cultural etc. for the benefit of members, families and farmers. The activities were conducted solely by IAT most of the time and rarely in association with similar organisations.

Sub-Committees for the term 2022-2025

Sl.No Name of sub-committee Chairman
1 Programmes committee Sri. M Mahantheshappa
2 Agricultural Policy and Development Dr. V . I. Benagi
3 Agribusiness Consultancy Services Sri. Venkatram reddy J. patil
4 Regional Chapter Development and Enrollment of Members Sri. L. I. Roodagi
5 Infrastructure and Maintenance Smt. C.N. NandiniKumari
6 Agricultural Extension and Farmers Education Dr. B. Krishnamurthy
7 Knowledge Enhancement, Health and cultural Activities Sri V.S. Patil
8 Newsletters, Publications and Library Dr. B.N.Ambarisha
9 Finance and Resource mobilization Smt. C.N. NandiniKumari